ಐಟಿ ಅಧಿಕಾರಿಗಳಿಗೇ ಸ್ಕೆಚ್ ಹಾಕಿದ್ರಂತೆ ಕಾಂಗ್ರೆಸ್ ಪ್ರಭಾವಿಗಳು..!!

ಬೆಳಗಾವಿ ಬೆಂಗಳೂರು ಮತ್ತು ಗೋಕಾಕ್ ನಲ್ಲಿ ರಮೇಶ್ ಜಾರಕಿಹೊಳಿ ಲಖನ್ ಜಾರಕಿಹೊಳಿ, ಮತ್ತು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷಿ ಹೆಬ್ಬಾಳ್ಕರ್ ಮನೆಗಳ ಮೇಲೆ ಐಟಿ ರೇಡ್ ಆಗಿದ್ದರ ಸಂಭಂದ ಐಟಿ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ಸ್ಪೋಟಕ ಮಾಹಿತಿಗಳನ್ನು ಹೊರಹಾಕಿದೆ.

ರೇಡ್ ನಡೆಯುತ್ತಿದ್ದ ವೇಳೆ ಜನರ ಗುಂಪುಗಳನ್ನು ಸೇರಿಸಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನಗಳು ಬೆಳಗಾವಿ ಮತ್ತು ಗೋಕಾಕ್ ನಲ್ಲಿ ನಡೆದವು ಆದರೆ ಅಧಿಕಾರಿಗಳು ಎಚ್ಚರಿಕೆಯಿಂದ ಪರಿಸ್ಥಿತಿ ನಿಭಾಯಿಸಿದರು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪತ್ರಿಕಾ ಹೇಳಿಕೆಯಲ್ಲಿ ಇಬ್ಬರೂ ನಾಯಕರ ಹೆಸರುಗಳನ್ನು ಪ್ರಸ್ತಾಪ ಮಾಡದೇ ಅವರ ಹುದ್ದೆಗಳ ಬಗ್ಗೆ ಮಾತ್ರ ಪ್ರಸ್ತಾಪಿಸಿ ಇಬ್ಬರೂ ಪ್ರಭಾವಿ ವ್ಯಕ್ತಿಗಳು ಎಂದು ನಮೂದಿಸಿದ್ದಾರೆ.

ವಿಶೇಷವೆಂದರೆ 162 ಕೋಟಿ ರೂಪಾಯಿಯ ಅಘೋಷಿತ ಮತ್ತು ಬೇನಾಮಿ ಹಣವನ್ನು ಜಾರಕಿಹೊಳಿ ಕುಟುಂಬ ಮತ್ತು ಅವರ ನೇತೃತ್ವದ ಸಹಾಕಾರಿ ಬ್ಯಾಂಕುಗಳಲ್ಲಿ ತೊಡಗಿಸಿರುವ ಸಂಭಂದ ಐಟಿ ಅಧಿಕಾರಿಗಳು ದಾಖಲೆಗಳನ್ನು ಕಲೆಹಾಕಿದ್ದಾರೆ. ಇದೇ ವೇಳೆ ೧೩ ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಅಸ್ತಿತ್ವದಲ್ಲೇ ಇಲ್ಲದ ವ್ಯಕ್ತಿಗಳ ಹೆಸರಿನಲ್ಲಿ ಶುಗರ್ ಪ್ಯಾಕ್ಟರಿಯಲ್ಲಿ ಶೇರುಗಳನ್ನು ತುಂಬಿರುವ ಕುರಿತೂ ಮಾಹಿತಿ ಕಲೆಹಾಕಿದ್ದಾರೆ. 

ಕಾಂಗ್ರೆಸ್ ನಾಯಕಿ ಲಕ್ಷಿ ಹೆಬ್ಬಾಳ್ಕರ್ ಮನೆಯಲ್ಲಿ 41 ಲಕ್ಷ ನಗದು ಸಿಕ್ಕಿದ್ದು ಹಣದ ಮೂಲ ತಿಳಿಸುವಂತೆ ನೋಟೀಸ್ ನೀಡಲಾಗಿದೆ.

Image

ಕಂಬಳ : ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಸಿದ್ಧತೆ.

ರಾಜ್ಯವ್ಯಾಪಿ ಕಂಬಳ ಗಲಾಟೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರವೂ ಕಂಬಳವನ್ನು ಅಧಿಕೃತಗೊಳಿಸಿ ಸುಗ್ರೀವಾಜ್ಞೆ ಹೊರಡಿಸಲು ಚಿಂತನೆ ನಡೆಸಿದೆ.
ಈ ಸಂಭಂದ ಮುಖ್ಯಮಂತ್ರಿಗಳು ತಜ್ಞರೊಂದಿಗೆ ನಾಳೆ ಮಾತುಕತೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸಂಭಂದ        ಸುಗ್ರೀವಾಜ್ಞೆ ಹೊರಡಿಸಿದ ರೀತಿಯಲ್ಲೇ ಕೇಂದ್ರದ ಅಂಗಳಕ್ಕೆ ಕಂಬಳದ ಚೆಂಡನ್ನು ಎಸೆಯಲು ನಿರ್ಧರಿಸಲಾಗುತ್ತದೆ ಎನ್ನಲಾಗುತ್ತಿದೆ.

ತಮಿಳುನಾಡಿನ ಜನಾಭಿಪ್ರಾಯಕ್ಕೆ ಮಣಿದ ಕೇಂದ್ರ ಸರ್ಕಾರ ಕಂಬಳಕ್ಕೆ  ಹೇಗೆ ಪ್ರತಿಕ್ರಿಯಿಸುತ್ತೆ ನೋಡಬೇಕು    ಹೊರಡಿಸಿದರೆ ರಾಜ್ಯ ಹಾಗು ಕೇಂದ್ರದಲ್ಲಿ ಬಿಜೆಪಿ ನಾಯಕರು ಇಕ್ಕಟ್ಟಿಗೆ ಸಿಲುಕುವ ಅಪಾಯವಿದೆ.

ಸುಗ್ರೀವಾಜ್ಞೆ ಅಂದರೆ ಏನು.

ಸಂಸತ್ತಿನಲ್ಲಿ ಅಥವಾ ವಿಧಾನ ಮಂಡಲದಲ್ಲಿ ಮಸೂದೆಯನ್ನು ಮಂಡಿಸದೆಯೇ ತುರ್ತಾಗಿ ಯಾವುದಾದರೂ ಆದೇಶವನ್ನು ಜಾರಿಗೆ ತರುವುದಿದ್ದರೆ ಅದನ್ನು ರಾಷ್ಟ್ರಪತಿಗಳು ಇಲ್ಲವೆ ರಾಜ್ಯಪಾಲರ ಸಹಿ ಪಡೆದು ಜಾರಿಗೆ ತರುತ್ತಾರೆ. ಇಂಥ ಆದೇಶಕ್ಕೆ ಸುಗ್ರೀವಾಜ್ಞೆ ಎನ್ನುತ್ತಾರೆ. ಈ ಸುಗ್ರೀವಾಜ್ಞೆ ೬ ತಿಂಗಳೊಳಗೆ ಶಾಸನಸಭೆಯ ಅನುಮತಿಯನ್ನು ಪಡೆಯಬೇಕು. ಇಲ್ಲದೆ ಹೋದರೆ ಅದು ತನ್ನಷ್ಟಕ್ಕೇ ಅನೂರ್ಜಿತಗೊಳ್ಳುತ್ತದೆ.

Image

ಡಿವೈಎಸ್ಪಿ ಮತ್ತು ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆ ಗೊಳಿಸಿ ಸರ್ಕಾರದ ಆದೇಶ.

Image

FLASH: ಎಣ್ಣೇ ಏಟಲ್ಲಿ ಬಂದ ಕಾರ್ಯಕರ್ತರಿಗೆ ಕುಮಾರಣ್ಣ ಅವಾಜ್.!

ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ-ಮುಖಂಡರ ಸಭೆ ನಡೆಯುವ ವೇಳೆ ಭಯಾನಕವಾಗಿ ಕುಡಿದು ಬಂದಿದ್ದ ಕಾರ್ಯಕರ್ತರ ವರ್ತನೆ ಕಂಡು ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ.
ಸ್ಥಳಿಯ ಜೆಡಿಎಸ್ ನಗರಾಧ್ಯಕ್ಷ ಹರೀಶ್ ಗೌಡರಿಗೆ ಚಾಮರಾಜ ಕ್ಷೇತ್ರದ ಟಿಕೇಟ್ ನೀಡುವಂತೆ ಪಾನಮತ್ತ ಕಾರ್ಯಕರ್ತರು  ಹೆಚ್.ಡಿ.ಕೆಗೆ ಘೇರಾವ್ ಹಾಕಿದರು.

ವಾಸ್ತವದಲ್ಲಿ ಮೈಸೂರು ವಿವಿ ನಿವೃತ್ತ ಕುಲಪತಿ ರಂಗಪ್ಪ ಅವರಿಗೆ ಜೆಡಿಎಸ್ ಟಿಕೆಟ್ ಸಿಗುತ್ತದೆ ಎಂಬ ಗುಸು ಗುಸು ಬಂದ ಹಿನ್ನೆಲೆಯಲ್ಲಿ ಹರೀಶ್ ಗೌಡ ಬೆಂಬಲಿಗರು ಬೆಳಿಗ್ಗೆಯಿಂದಲೇ ಕುಡಿಯಲು ಆರಂಬಿಸಿದ್ದರಂತೆ..

ವಿಷಯ ತಿಳಿದ ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೇಯೇ ಹರೀಶ್ ಅವರನ್ನು ಈ ಕ್ಷಣವೇ ನಿನ್ನನ್ನು ಪಾರ್ಟಿಯಿಂದ ತೆಗೆದುಹಾಕುತ್ತೇನೆ ಎಂದು ಎಚ್ಚರಿದ್ದಾರೆ. ಇದೇ ವೇಳೆ  ನಿನ್ನ ಬೆಂಬಲಿಗರು ಸುಮ್ಮನಿರಲಿಲ್ಲ ಅಂದ್ರೆ ನಿನಗೆ ಕಾದಿದೆ. ನನ್ನ ಹತ್ರ ಇದನ್ನೆಲ್ಲ ಇಟ್ಕೋಬೇಡ ಎಂದು ಗುಡುಗಿದರು ಎನ್ನಲಾಗಿದೆ.‌

ಎಂಥವರನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ದೀರಿ ಅಂತ ಶಾಸಕ ಜಿ.ಟಿ.ದೇವೆಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೈಸೂರಿನ ಹೈವೇ ವೃತ್ತದ ಖಾಸಗಿ ಹೋಟೆಲ್ ನಲ್ಲಿ ಇಂದು ಘಟನೆ ನಡೆದಿದೆ.

Image

ಪೋಲೀಸ್ ಮಹಾ ಸಂಘದ ಅಧ್ಯಕ್ಷರಿಂದ ಕುಮಾರಸ್ವಾಮಿ ಭೇಟಿ.

ಅಖಿಲ ಕರ್ನಾಟಕ ಪೋಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಮಾಡಿದ್ದಾರೆ.

ಶಶಿಧರ್ ವೇಣುಗೋಪಾಲ್ ರಾಜ್ಯವ್ಯಾಪಿ ಪೋಲೀಸ್ ಪ್ರತಿಭಟನೆಯನ್ನು ಸಂಘಟಿಸಿದ ಕಾರಣಕ್ಕಾಗಿ ರಾಜ್ಯಸರ್ಕಾರದ ಅವಕೃಪಗೆ ಗುರಿಯಾಗಿದ್ದರು.

ಸುಮಾರು ಮೂರು ತಿಂಗಳ ಕಾಲ ಕಾನೂನು ಹೋರಾಟದ ನಂತರ ಜಾಮೀನು ಪಡೆದು ಹೊರಬಂದಿದ್ರೂ..

Image

ಕೈಗಾರಿಕೋದ್ಯಮಿಗಳ ಮೇಲೆ ಕುಮಾರಸ್ವಾಮಿ ಸ್ಕೆಚ್.‌!

ವಿಧಾನಸಭಾ ಚುನಾವಣೆಗಳ ಬಿಸಿ ಇನ್ನೇನು ಕಾವೇರುವ ಲಕ್ಷಣಗಳು ಗೋಚರಿಸುತ್ತಿವೆ ಎಲ್ಲಾ ಪಕ್ಷಗಳಲ್ಲೂ ಸಂಘಟನೆ, ಒಳಜಗಳಗಳಿಗೆ ಸಂಕ್ರಮಣ ಬಂದ ಹಾಗಿದೆ. ಸೋಮಣ್ಣ ಈಶ್ವರಪ್ಪ ಯಡಿಯೂರಪ್ಪ ಅವರ ಜಗಳಗಳು ತಾರಕ್ಕೇರುತ್ತಿರುವ ಬೆನ್ನಲ್ಲೇ ಜೆಡಿಎಸ್ ನ ಕುಮಾರಸ್ವಾಮಿ ಸದ್ದಿಲ್ಲದೇ ಅಖಾಡಕ್ಕೆ ದುಮುಕಿದ್ದಾರೆ.

ಅಮೇರಿಕಾ ಪ್ರವಾಸ ಮುಗಿಸಿಬಂದ ಕುಮಾರಸ್ವಾಮಿ ಅವರು ಬೆಂಗಳೂರಿನ ಉದ್ಯಮಿಗಳ‌ ಮೀಟಿಂಗ್ ಕರೆದಿದ್ದಾರೆ, ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಆಲಿಸಲು ಮುಂದಾಗಿದ್ದಾರೆ


ಸಾಮಾನ್ಯವಾಗಿ ಆಡಳಿತಾರೂಡ ಪಕ್ಷದ ಜೊತೆಗೇ ಗುರುತಿಸಿಕೊಳ್ಳೋ  ಉದ್ಯಮಿಗಳು ವಿರೋಧ ಪಕ್ಷದ ನಾಯಕರ ಜೊತೆ ಓಪನ್ ಮೀಟಿಂಗ್ ನಲ್ಲಿ ಪಾಲ್ಗೊಳ್ಳೋದು ಅಪರೂಪ.

Image

ಸರ್ಕಾರಿಬಾಬು Scoop: ವಿಧಾನಸಭೆಗೆ ಶಾಸಕ:ಸಿಸಿಬಿಗೆ ಮೋಸ್ಟ್ ವಾಂಟೆಡ್…!!

​ವಿಧಾನಸಭೆಯಲ್ಲಿ ನಮ್ಮನ್ನು ಪ್ರತಿನಿಧಿಸುವ ಶಾಸಕರ ಪೂರ್ವಾಶ್ರಮ ಎಂತೆಂತ್ತದಿರುತ್ತೆ ಎಂಬುದು ಎಲ್ಲಾರಿಗೂ ಗೊತ್ತಿರುವ ವಿಷಯಾನೇ ಬಿಡಿ. ಸಮಾಜದಲ್ಲಿ ಏನೇನೋ ಮಾಡುತ್ತಾ ಕಟ್ಟಕಡೆಗೆ ಜನಪ್ರತಿನಿಧಿಗಳೂ ಜನನಾಯಕರೂ ಸಮಾಜಸೇವಕರೂ ಆಗಿ ನಾನಾ ವೇಶಗಳಲ್ಲಿ ಅವತರಿಸಿಬಿಡುತ್ತಾರೆ..!!

ಅಂತದ್ದೇ ಇಂಟರಸ್ಟಿಂಗ್ ವಿಷಯಗಳನ್ನು ಹೇಳುತ್ತಿದ್ದೇವೆ ಓದಿ, ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ಶಾಸಕ ಕೆ.ಗೋಪಾಲಯ್ಯ ಬೆಂಗಳೂರಿನ ಸಿಟಿ ಕ್ರೈಂ ಬ್ರಾಂಚಿನ ನೋಟಿಸ್ ಬೋರ್ಡಿನಲ್ಲಿ  ಇನ್ನೂ ರಾರಾಜಿಸುತ್ತಿದ್ದಾರೆ. 

ಸಿ ಸಿ ಬಿ ಕಚೇರಿಯ ಪಡಸಾಲೆಯಲ್ಲಿರುವ ನೋಟೀಸ್ ಬೋರ್ಡ್ ನಲ್ಲಿ ಗೋಪಾಲಯ್ಯನವರ ಪಾಸ್ಪೋಟ್ಟ್ ಸೈಜಿನ ಪೋಟೋ ಇನ್ನು ವಾಂಟೆಡ್ ಲಿಸ್ಟ್ ನ ಮೊದಲ ಸಾಲಿನಲ್ಲೇ ಇದೆ.

ಇದೇ ಲಿಸ್ಟಿನಲ್ಲಿ ಪುರಾತನ ರೌಡಿ ಗಳು ಹಾಗು ಹಾಲಿ ರೌಡಿಗಳ ಸ್ಲೇಟು ಹಿಡಿದ ಪೋಟೋಗಳೂ ಇವೆಯಾದರೂ ಗೋಪಾಲಯ್ಯ ಅವರ ಚನ್ನಾಗಿರೋ ಪೋಟೋ ಇಟ್ಟಿದ್ದಾರೆ.

ಇದೇ ಲಿಸ್ಟಿನಲ್ಲಿರುವ ಇನ್ನೊಂದು ಹೆಸರು ಮಾಜಿ ಅಂಡರ್ ವರ್ಲ್ಡ್ ಡಾನ್ ಜಯಕರ್ನಾಟಕ ಸಂಘಟನೆಯ  ಮುತ್ತಪ್ಪ ರೈ ಅವರದು.

ಇದೇ ಲಿಸ್ಟಿನಲ್ಲಿರುವ ಮತ್ತೊಂದು ಹೆಸರು ಅಗ್ನಿ ವಾರಪತ್ರಿಕೆಯ ಸಂಪಾದಕ ಶ್ರೀಧರ್ ಅವರದು.

ಒಂದು ಕಾಲದಲ್ಲಿ ಬೆಂಗಳೂರಿನ ಪಾತಕ ಲೋಕದ ಪಂಟರ್ ಗಳಾಗಿದ್ದೂ ಈಗ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಕೊಂಡಿರುವ ಇವರ ಪೋಟೋಗಳು ಇನ್ನೂ ವಾಂಟೆಡ್ ಲಿಸ್ಟ್ ನಲ್ಲಿ ಇರೋದೆ ವಿಪರ್ಯಾಸ.

ವಿಶೇಷ ಅಂದ್ರೆ ಮರಿ ಪುಡಾರಿಗಳ ಕೈಗೆ ಸ್ಲೇಟು ಹಿಡಿದಿರೋ ಪೋಟೋಗಳಿವೆ ಆದರೆ ಮೇಲಿನ ವ್ಯಕ್ತಿಗಳಿಗೆ ಇದ್ದಿದ್ರಲ್ಲೇ ಸ್ವಲ್ಪ ಗೌರವ ಬರೋ ಪೋಟೋಗಳನ್ನ ಹಾಕಿದ್ದಾರೆ.

ಈಗಾಗಲೇ ಎನ್ ಕೌಂಟರ್ ಗಳಲ್ಲಿ ಹತ್ಯೆಯಾದವರ ಪೋಟೋಗಳ ಮೇಲೆ ಕೆಂಪು ಬಣ್ಣದಲ್ಲಿ ಕತ್ತರಿ ಮಾರ್ಕ್ ಮಾಡಲಾಗಿದೆ.

 ಇದೇ ಲಿಸ್ಟಿನಲ್ಲಿ ರಾಜಕಾರಣದಲ್ಲಿ ತೊಡಗಿಸಿಕೊಂಡಿರೋ  ಜೇಡರಹಳ್ಳೀ ಕೃಷ್ಣಪ್ಪ..ಬಿ.ಜೆ.ಪಿಯಲ್ಲಿರೋ  ರಾಮಾ ಲಕ್ಷ್ಮಣ  ಸಹೋದರರು,  ಶಿವಮೊಗ್ಗ ಜೆ.ಡಿ.ಎಸ್ ನಾಯಕ ಕೃಷ್ಣಮೂರ್ತಿ, ಮಾರೇನಹಳ್ಳಿ ಜಗ್ಗ ಮುಂತಾದವರಿದ್ದಾರೆ.

Image